‘ಗ್ರಾಮಾಯಣ’ ದಲ್ಲಿ ಮಿಂಚಿದ ವಿನಯ್ ರಾಜಕುಮಾರ್.

‘ಗ್ರಾಮಾಯಣ’ ದಲ್ಲಿ ಮಿಂಚಿದ ವಿನಯ್ ರಾಜಕುಮಾರ್.

ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡ ವಿನಯ್ ಅದ್ಭುತ ನಟನೆ ಮಾಡಿದ್ದಾರೆ. ಇದೊಂದು ಹಳ್ಳಿಯ ಕಥೆಯಾಗಿರುವುದರಿಂದ ಎಲ್ಲಾ ಹಳ್ಳಿಗಳಿಗೂ ಅನುಸರಿಸುವಂತ ಕಥೆ ಸಿನಿಮಾದಲ್ಲಿದೆ. ಚಿತ್ರ ಲೇಟಾಗಿ ಬಂದ್ರು ಅಭಿಮಾನಿಗಳಿಗೆ ಅಂತೂ ಸಿನಿಮಾ ನೋಡಿ ಖುಷಿಯಾಗಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು. ಈ ಸಿನಿಮಾ ವಿನಯ್ ರಾಜಕುಮಾರ್ ರವರಿಗೆ ಸ್ಪೂರ್ತಿ ತಂದುಕೊಟ್ಟಿದೆ. ಚಿತ್ರದ ನಿರ್ದೇಶಕರು ದೇವನೂರು ಚಂದ್ರು ರವರು ಹಳ್ಳಿ ಸೊಗಡಿನ ಕಥೆಯನ್ನು ಎಳೆ ಎಳೆಯಾಗಿ ರಚಿಸಿದ್ದಾರೆ.ಈ ಚಿತ್ರದಲ್ಲಿ ಸೀನ ಎಂಬ ಯುವಕನ ಸುತ್ತ ಹೆಣೆಯಲಾದ ಕಥೆಯಾಗಿದ್ದು. ತನ್ನ ಊರಿನಲ್ಲೇ ಏನಾದರೂ ಸಾಧಿಸಬೇಕೆಂಬ ಆತನ ಆಸೆ ಮತ್ತು ಅದಕ್ಕೆ ಎದುರಾಗುವ ಸವಾಲುಗಳನ್ನು ಚಿತ್ರಿಸುತ್ತದೆ. 2008 ರ ಕಾಲಘಟ್ಟದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಗ್ರಾಮದ ರಾಜಕೀಯ ಮತ್ತು ಬದುಕಿನ ಸಂಘರ್ಷಗಳನ್ನು ತೆರೆದಿಡುತ್ತದೆ. ಲೂಸ್ ಮಾದ ಯೋಗಿ ಅವರು ಈ ಚಿತ್ರದಲ್ಲಿ ಅಭಿನಯಿಸಿರುವುದು ಅಭಿಮಾನಿಗಳಿಗಂತು ಜೋಶ್ ತಂದುಕೊಟ್ಟಿದೆ.

Leave a Reply

Your email address will not be published.