October 27, 2025
ಹಳ್ಳಿಗಳಲ್ಲಿ 9 ಗಂಟೆಯ ‘ನಮೋ ವೆಂಕಟೇಶ’
ಐವತ್ತರ ದಶಕದಿಂದ ಮೊದಲ್ಗೊಂಡು ಎಂಬತ್ತರ ದಶಕದವರೆಗೂ, ಹಳ್ಳಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಒಂದು ವಾಣಿಜ್ಯ ಪ್ರದೇಶದಲ್ಲಿ, ಟೆಂಟ್ ಚಿತ್ರಮಂದಿರಗಳನ್ನು ಕಾಣಬಹುದಾಗಿತ್ತು. ಇಲ್ಲೆಲ್ಲಾ ರಾತ್ರಿ 9-00 ಗಂಟೆಯ ಒಂದೇ ಪ್ರದರ್ಶನ ಕಾಣುತ್ತಿತ್ತು. ಏಕೆಂದರೆ ಹಳ್ಳಿಗಾಡಿನ ಜನ, ಬೆಳಗ್ಗಿನ ಹೊತ್ತು ಯಾವುದೇ ಸಿನಿಮಾ ನೋಡುವ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸಹಜವಾಗಿ ರಾತ್ರಿಯ ಹೊತ್ತಿಗೆ, ಅವರೆಲ್ಲ ಊಟ ಮಾಡಿ 9-00 ಗಂಟೆಯ ಶೋಗೆ ಹೋಗುತ್ತಿದ್ದರು. ಆ ಚಿತ್ರಮಂದಿರದ ಸುತ್ತಲಿನ ಹಳ್ಳಿಗಾಡಿನ ಜನ ರಾತ್ರಿಯ ಹೊತ್ತಿಗೆ ಒಟ್ಟಿಗೆ ಎಲ್ಲರೂ ಸೇರಿಕೊಂಡು ಒಂದು ಬಂಡಿ ಕಟ್ಟಿಕೊಂಡು ಸಿನಿಮಾ ನೋಡಲು ಹೋಗುತ್ತಿದ್ದರು. 7-00 ಗಂಟೆಯ ಹೊತ್ತಿಗೆಲ್ಲಾ ಚಿತ್ರಮಂದಿರದ ಮೈಕಿನಲ್ಲಿ ಹಾಡುಗಳು ಶುರುವಾಗುತ್ತಿತ್ತು. ಕೊನೆಯದಾಗಿ 'ನಮೋ ವೆಂಕಟೇಶ....' ಹಾಡು ಹಾಕಿದರು ಅಂದ್ರೆ ಚಿತ್ರ ಶುರುವಾಯಿತು ಅಂತಲೇ ಅರ್ಥ. ಹಾಗಾಗಿ ಚಿತ್ರಮಂದಿರದ ಹೊರಗೆ ನಿಂತವರೆಲ್ಲ ಅಲ್ಲಿಂದ ತಕ್ಷಣ ಹೊರಟು ಚಿತ್ರಮಂದಿರದ ಒಳಗಡೆ ಸೇರಿಕೊಳ್ಳುತ್ತಿದ್ದರು.
Chandan
Village theatre is butiful
October 27, 2025