October 28, 2025
ನಮ್ಮ ಬಂಗಾರದ ಮನುಷ್ಯ ಡಾ.ರಾಜಕುಮಾರ್
ಎಂ.ಟಿ.ಆರ್. ನಲ್ಲಿ ಬಂಗಾರದ ಲೋಟದಲ್ಲಿ ಕಾಫಿ ಕುಡಿಯುತ್ತಿರುವ ಬಂಗಾರದ ಮನುಷ್ಯ ರಾಜಣ್ಣ. VIP ಗಳಿಗೆ ಎಂ ಟಿ ಆರ್ ನಲ್ಲಿ ಬೆಳ್ಳಿ ಕಪ್ ನಲ್ಲಿ ಕಾಫಿ ಕೊಡೋ ಪದ್ದತಿ ಇದೆ. ಬಂಗಾರದ ಲೋಟದಲ್ಲಿ ಅಲ್ಲ… ಶ್ರೀ ಪ್ರವೀಣ್ ನಾಯಕ್ ಅಣ್ಣ ಜೊತೆ ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜಕುಮಾರ್ ಎಂಟಿಆರ್ ಗೆ ಭೇಟಿ ನೀಡಲು ಹೋದಾಗ, ಎಂಟಿಆರ್ ಮಾಲೀಕರಾದ ಶ್ರೀ ಮಯ್ಯ ಅವರು ಅಣ್ಣಾವ್ರನ್ನ ಹೇಗೆ ಉಪಚರಿಸಬೇಕೆಂದು ಯೋಚಿಸಿ, ಯೋಜಿಸಿ, ಕೊನೆಗೆ ಬಂಗಾರದ ಮನುಷ್ಯನಿಗೆ ಬಂಗಾರದ ಲೋಟ ದಲ್ಲಿ ಕಾಪಿ ನೀಡಬೇಕೆಂದು ನಿರ್ಧರಿಸಿದರು.
ಆಗ ನಡೆದದ್ದೇ ಈ ಘಟನೆ.
ಎಂಟಿಆರ್ ಇತಿಹಾಸದಲ್ಲಿ ಬಂಗಾರದ ಲೋಟದಲ್ಲಿ ಕಾಪಿ ಕುಡಿದ ಮೊದಲ ಹಾಗೂ ಏಕೈಕ ವ್ಯಕ್ತಿ ನಮ್ಮ ಬಂಗಾರದ ಮನುಷ್ಯ ಡಾ.ರಾಜಕುಮಾರ್ ಅವರು.
