October 28, 2025
ಇದಾದ ನಂತರ ೧೯೭೬ ರಲ್ಲಿ ಮತ್ತೇ ಡಾಃ ರಾಜ್ ರವರ ಕಾಲಶೀಟ್ ಪಡೆದು ಭಾಗ್ಯವಂತರು ನಿರ್ಮಿಸಿದರು.
ದ್ವಾರಕೀಶ್ ರವರಿಗೆ ಮೊದಲಿನಿಂದಲೂ ಅಭಿನಯದ ಜೊತೆಗೆ ನಿರ್ಮಾಣದಲ್ಲೂ ಹೆಚ್ಚಿನ ಒಲವು ಇದ್ದಿರಬಹುದು. ಜೊತೆಗೆ ರಿಮೇಕ್ ಬಗ್ಗೆಯೂ ಕೂಡಾ ಆಸಕ್ತಿ ಬಹಳ ಇತ್ತು ಅಂತ ಕಾಣುತ್ತದೆ. ೧೯೬೬ ರಲ್ಲಿ ತಾವು ಹಾಗೂ ಇನ್ನಿಬ್ಬರೊಂದಿಗೆ ಕೂಡಿಕೊಂಡು ಬಿ. ಎಂ. ವೆಂಕಟೇಶ್, ಜಯಂತಿ ತಾರಾಗಣದಲ್ಲಿ ಮಮತೆಯ ಮಡಿಲು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರವು ತೆಲುಗು ಚಿತ್ರವೊಂದರ ರಿಮೇಕ್. ಬಹುಶಃ ಈ ಚಿತ್ರ ಅವರಿಗೆ ಲಾಭವನ್ನೇನು ಮಾಡಿ ಕೊಡಲಿಲ್ಲ ಅಂತ ಕಾಣುತ್ತೆ. ಮುಂದೆ ಚಿತ್ರ ನಿರ್ಮಾಣ ಕೈಗೊಳ್ಳಲಿಲ್ಲ. ಅಭಿನಯವನ್ನೇ ಮುಂದುವರೆಸಿದರು.
ಡಾಃ ರಾಜ್ ರವರೊಂದಿಗೆ ನರಸಿಂಹರಾಜು ರವರು ಮುನಿಸುಕೊಂಡಾಗ, ಆ ಸ್ಥಾನಕ್ಕೆ ದ್ವಾರಕೀಶ್ ಬಂದರು. ರಾಜ್ ರವರೊಂದಿಗೆ ಅವಕಾಶ ಪಡೆಯುತ್ತ, ಅವರ ವಿಶ್ವಾಸವನ್ನೂ ಗಳಿಸಿ ಕೊಂಡರು. ೧೯೬೯ ರಲ್ಲಿ ದ್ವಾರಕೀಶ್ ರವರು ರಾಜ್ ರವರ ಕಾಲಶೀಟ್ ಪಡೆದುಕೊಂಡರು. ಆಗ ಅವರ ಹತ್ತಿರ ಚಿತ್ರ ನಿರ್ಮಾಣಕ್ಕಾಗಿ ಅಲ್ಲ, ರಾಜ್ ರವರಿಗೆ ಸಂಭಾವನೆಯ ಮುಂಗಡ ಹಣ ನೀಡಲೂ ಸಹ ಹಣವಿರಲಿಲ್ಲ. ಕಡೆಗೂ ಹೇಗೋ ಹಣ ಹೊಂದಿಸಿ, ರಾಜ್ ರವರಿಗೆ ಮುಂಗಡ ಹಣ ನೀಡಿದರು. ಎಷ್ಟು ಗೊತ್ತೇ... ಒಂದು ಸಾವಿರವಲ್ಲ, ಒಂದು ನೂರಲ್ಲ, ಕಡಗೆ ಹತ್ತು ರೂಪಾಯಿಯೂ ಅಲ್ಲ. ಬರಿ ಒಂದೇ ಒಂದು ರೂಪಾಯಿಯನ್ನು ರಾಜ್ ರವರಿಗೆ ಸಂಭಾವನೆಯ ಮುಂಗಡ ಹಣ ನೀಡಿದರು. ದ್ವಾರಕೀಶ್ ರವರು ಆ ಒಂದು ರೂಪಾಯಿಯು ತಮ್ಮಲ್ಲಿ ಇದ್ದದ್ದು ಅಲ್ಲ. ಸಾಲ ಮಾಡಿ ಪಡೆದಿದ್ದು. ಆ ಸಾಲ ಯಾರಿಂದ ಪಡೆದರು ಗೊತ್ತೇ.. ಸಂಕಲನಕಾರರಾದ ಎಂ. ಭಕ್ತವತ್ಸಲಂ ರವರಿಂದ. ರಾಜ್ ಕಾಲಶೀಟ್ ಸಿಕ್ಕಿತೆಂದರೆ, ಹಂಚಿಕೆದಾರರು ಮುಂಗಡವಾಗಿ ಹಣ ನೀಡಲು ಸಾಕಷ್ಟು ವಿತರಕರಿದ್ದರು. ಹೀಗಾಗಿ ದ್ವಾರಕೀಶ್ ರಿಗೆ ಚಿತ್ರ ನಿರ್ಮಾಣ ಮಾಡಲು ತಾಪತ್ರಯವೇನೂ ಆಗಲಿಲ್ಲ. ಚಿತ್ರ ಮುಗಿಸಿದರು. ಚಿತ್ರ ಬಹು ಯಶಸ್ವಿಯಾಯ್ತು. ಸಾಕಷ್ಟು ಹಣವನ್ನು ಕಂಡರು ಇದಾದ ನಂತರ ೧೯೭೬ ರಲ್ಲಿ ಮತ್ತೇ ಡಾಃ ರಾಜ್ ರವರ ಕಾಲಶೀಟ್ ಪಡೆದು ಭಾಗ್ಯವಂತರು ನಿರ್ಮಿಸಿದರು. ಯಶಸ್ವಿಯೂ ಕಂಡರೂ, ಅನಂತರ ನಿರಂತರವಾಗಿ ಚಿತ್ರ ನಿರ್ಮಾಣಗಳಲ್ಲಿ ತೊಡಗಿಸಿಕೊಂಡರು. ಸಾಹಸಗಳನ್ನೂ ಮಾಡಿದರು